ಶುಕ್ರವಾರ, ಮಾರ್ಚ್ 16, 2018

ಬದುಕಿನ ನೈಜತೆ ಬಗೆಗಿನ ಒಂದು ಸಣ್ಣ ಕವನ...

ಬದುಕೊಂದು ನಾಟಕ ಬಂಡಿ, ಅದರಲ್ಲಿರುವ ಸೂತ್ರದ ಬೊಂಬೆ ನೀ, ಹುಟ್ಟತ್ತ ಹೆತ್ತವರು, ಬೆಳೆಯುತ್ತ ಗೆಳೆಯರು ಹಿತ್ತೆಷಿಗಳು, ನಂತರ ಸಂಗಾತಿ ಮನೆ ಮಕ್ಕಳು, ಎಷ್ಟೊ ಮಂದಿ ಹಾದುಹೋಗುವ ಈ ಜೀವನದ ಬಂಡಿಯಲ್ಲಿ ಹಲ್ಲವು ಬಣ್ಣ ಹಚ್ಚದ ಪಾತ್ರಗಳನ್ನು ನಟಿಸುತ್ತ ಸಾಗುವ ಕೆಲ್ಲಸ ನಿನ್ನದು ಈ ಭೂಮಿಯಲ್ಲಿ, ಹಾದಿಯಲ್ಲಿ ಸಿಕ್ಕು ನಿನ್ನಂತ್ತೆ ನಟಿಸುವ ನಿನ್ನವರಂತ್ತೆ ತೊರುವ ಸಾವಿರಾರು ಮಂದಿ ಬಂದರೂ ಯಾರು ಬಾರರು ನಿನ್ನ ಜೀವನದ ಬಂಡಿಯುದ್ದಕ್ಕೂ, ಆದರೂ ನನ್ನವರೂ ನನ್ನದು ಎಂದು ಕಾಡುತ್ತ ಕೊರಗುತ್ತ ನಿಲ್ಲುವೆ ನೀ ಬಂದ ಕಾರ್ಯಯವ ಮರೆತ್ತು, ನಿನ್ನ ಕಾರ್ಯ ನೀ ಮರೆತರೂ, ನಿನ್ನ ಸೂತ್ರಧಾರ ಮರೆಯನ್ನೂ, ನಿನ್ನ ಕಾರ್ಯವ ನಿನ್ನೀಂದ ಮುಗಿಸಿ ಕಳಿಸುವನ್ನು ನಿನ್ನ ಇನ್ನೋಂದು ನಾಟಕದ ಪರಪಂಚಕ್ಕೆ, ಮರು ಮಾತ್ತಾಡದೆ ಎಲ್ಲವನ್ನು ತೊರೆದು ನೀ ನಡೆವೆ ಆ ಸತ್ಯದ ನಾಡಿಗೆ, ಇರುವ ಸತ್ಯವ ಅರಿಯದೆ ಅರ್ಥವಿರದ ನೂರಾರು ಸಂಬಂಧಗಳಿಗೆ ಕಟ್ಟು ಬಿದ್ದು ಬಂದಿಯಾಗಿ ಬಾಳುವ ಬದಲ್ಲು, ನೀ ಇರುವಷ್ಟು ದಿನ ಖುಷಿಯನ್ನು ಹಂಚಿ ನಿನ್ನ ಕರೆ ಬಂದಾಗ ಹೊರಡು ನೀ ಒಂಟಿ ಬಾನಾಡಿಯಾಗಿ...
                                                                                                   :-ಒಂಟಿ ಬಾನಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...