ಶುಕ್ರವಾರ, ಮಾರ್ಚ್ 16, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |18|

ನದಿಯ ತೆರಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು .? |
ಉದಕಬುದ್ಭುದವೆಲ್ಲ ! -ಮಂಕುತಿಮ್ಮ |೧೮|

ತಾತ್ಪರ್ಯ :-
ಈ ಜಗತ್ತಿನಲ್ಲಿ ಜೀವಿಗಳು ನದಿಯ ತೆರೆಗಳಂತೆ ಉರುಳಿ ಹೊರಳಾಡುತ್ತಿವೆ. ಅದರಂತೆಯೇ ಇವಕ್ಕೆ ಮೊದಲು, ನಿಲುವು ಮತ್ತು ಕೊನೆಗಳು ಇಲ್ಲವಾಗಿವೆ. ಅಂತೆಯೇ ಜನರು ಬದುಕು,ಸಾವು, ಅಮೃತ ಅಥವಾ ವಿಷ, ಇವುಗಳೆಲ್ಲವೂ ನೀರಿನ ಗುಳ್ಳೆಗಳಿದಂತ್ತೆ, ಈವತ್ತು ಇರುತ್ತವೆ ನಾಳೆ ಹೋಗುತ್ತವೆ ಯಾವುದು ಶಾಶ್ವತವಲ್ಲ.
                                                                                                   :- ಡಿ.ವಿ.ಜಿ
Abstraction In English :-

The life beings always fallen and billows like waves in the river, as similar to that, they also don't have any past, present and future. Similarly our life and death , ambrosia and poison, are all like water bubble, present today, but not tomorrow, nothing is permanent in this volatile Life
                                                                                                  :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...