ಮಂಗಳವಾರ, ಮಾರ್ಚ್ 27, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |47|

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಿಕಿಸಿದೊಡದು ಲಾಭ - ಮಂಕುತಿಮ್ಮ |೪೭ |
ತಾತ್ಪರ್ಯ:-
ನಮಗಿರುವುದೇ ಅರ್ಧ ಕಣ್ಣೆಂದು ಕೊಗಿದರೂ ಸುಖವೇನೂ ಇಲ್ಲ. ಅದರ ಬದಲು, ದೇವರು ನಮಗೆ ಕೊಟ್ಟಿರುವ ಕಣ್ಣುಗಳು ಉಪಯೋಗಿಸಿ, ಇರುವ ಬೆಳಕಿನಲ್ಲಿ ಆದಷ್ಟು ನೋಡಿದರೆ, ಲಾಭವಾಗಬಹುದು :- ಡಿ.ವಿ.ಜಿ

Abstraction In English :-
If we sorrow thinking that we just have half vision what do we get except sadness, Instead if we use the remaining half to see this beautifull world, your heart fills with happiness :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...