ಸೋಮವಾರ, ಮಾರ್ಚ್ 19, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |21|

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ ಮಣ್ಣೆನುವನ್
ಅವನ ವರ ಮಣ್ಣೆನುವೆ ನೀನು||
ಬಿನ್ನಮಿಂತರೆ ವಸ್ತುಮೌಲ್ಯಗಳ ಗಣನೆಯೀ
ಪುಣ್ಯಕ್ಕೆ ಗತಿಯೆಂತೊ -ಮಂಕುತಿಮ್ಮ |೨೧|

ತಾತ್ಪರ್ಯ :-
ನಾವು ಚಿನ್ನವೆಂದು ಭಾವಿಸಿದ ವಸ್ತು ಮಣ್ಣಾಗಿ, ಏನೂ ಬೆಲೆಯಿಲ್ಲದ ವಸ್ತು ಆಗಿಹೋಗುತ್ತದೆ. ಆದರೆ ವಿಧಿ ನಮಗೆ ಕೊಟ್ಟ ವರ, ಅದು ಚಿನ್ನವಾಗಿದ್ದರೂ ನಮಗೆ ಮಣ್ಣಿನಂತೆ ಭಾಸವಾಗುತ್ತದೆ. ವಸ್ತುಗಳ ಮೌಲ್ಯಗಳು ವ್ಯತ್ಯಾಸವಾಗುತ್ತಿರುವ ಈ ವ್ಯಾಪಾರದ ಗತಿಯೇನು .?
ಹಲವಾರು ಸಲ, ನಾವು ಭಾವಿಸುವುದೊಂದು, ಅದರೆ ಆಗುವುದಿನ್ನೊಂದು, ವಿಧಿಯ ಆಟವ ಅರಿತು ನಡಯದಿದರೆ ಎಂದಿಗೂ ಗೊಂದಲ ತಪ್ಪಿದಲ್ಲ ಎಂದು ತಿಳಿಸುವುದೆ ಈ ಸಾಲಿನ ಅರ್ಥ
                                                                                                  :- ಡಿ.ವಿ‌.ಜಿ

Abstraction In English:
The thing you took as Gold in your Hand turns into be a worthless Mud, and Even if the life gives you Gold, you consider it as Worthless Mud, when you can't differentiate between the actual worth of  things, You'll always be confused in Life : 
                                                                                                  :- D.V.G 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...