ಶುಕ್ರವಾರ, ಮಾರ್ಚ್ 16, 2018

ಒಂದು ಅಂದದ ಗಿಣಿಯ ಕಥೆ

ಒಂದು ಸುಂದರ ಅಡವಿಯಲ್ಲಿ ಇತ್ತೊಂದು ಚೆಂದದ ಗಿಣಿಗಳ ಗುಂಪು, ಆ ಗುಂಪಿಗೆ ಸೆರಿತು ವಲಸೆ ಬಂದ ಗಿಣಿಯೊಂದು, ಆಡುತ್ತಾ ಪಾಡುತ್ತಾ ಬಿನ್ನವರೊಡನೆ ತಾನೊಂದಾಯ್ತು ಅ ವಾಲಸೆ ಬಂದ ಗಿಣಿಯಿಂದು, ಈ ನಡುವೆ ಹೇಗೊ ಏನೋ ಕಂಡಿತ್ತೊಂದು ಅಂದದ ಚೆಂದದ ಹೆಣ್ಣು ಗಿಣಿಯೊಂದು, ಹುಣಿಮೆಯ ಚಂದಿರನ ನಗುವನೂ ಕಂಗಳಿಂದ ಕೂಡಿದ ಆ ಗಿಣಿಯನ್ನು ಕಂಡು ಎಂದು ಮಿಡಿಯದ ಆ ಗಿಣಿಯ ಹೃದಯ ಮಿಡಿಯಿತ್ತು ಸಪ್ತ ಸ್ವರಗಳ ಸಿಂಧು. ಎಲ್ಲೂ ಕಾಣದ ಹರುಷವ, ಎಂದೂ ಬಾರದ ಉತ್ಸಾಹವ ತುಂಬಿ ಎಲ್ಲರಲ್ಲೂ ಒಂದಾಗಿ ಎಂದೆಂದೂ ನಗು ನಗುತ್ತಾ ಖುಷಿಯಿಂದ ನಡೆವ ಆ ಹೆಣ್ಣು ಗಿಣಿಯ ಕಂಡು ತಾನು ಅದರಂತೆ ನಡೆಯಿತ್ತು ಆ ಗಂಡು ಮುಂದು, ಒಂದು ಸಿಹಿ ಮುಂಜಾನೆಯ ಆ ನಸು ಗೆಂಪು ಸೂರ್ಯನ ಕಿರಣಗಳ ಸಾಕ್ಷಿಯಾಗಿ ತನ್ನ ಮನಸಿನ ತೊಡರನ್ನೂ ತೊಡಿ ಕೊಂಡಿತ್ತು ಆ ಗಂಡು ಗಿಣಿ ಈ ಹೆಣ್ಣು ಗಿಣಿಯ ಮುಂದು, ಗಂಡು ಗಿಣಿಯ ಮನಸಿನ ತೊಡರನ್ನು ತಿರಸ್ಕರಿಸಿ ಮುದುರಿಕೊಂಡಿತ್ತು
ಹೆಣ್ಣು ಗಿಣಿಯು, ಕನಸಿನ ಗೋಪುರ ತೆಜಿಸಿ ನಿನ್ನ ಲೋಕದಲ್ಲಿ ನೀ ಸುಖದಿಂದಿರು ಎಂದು ಹರಸಿ ಹಿಂದಿರುಗಿತ್ತು ಆ ಗಂಡು ಗಿಣಿ ಅಂದು, ಆದರೂ ಮನಸು ತಾಳದೆ ದೂರದಿಂದ ಹೆಣ್ಣು ಗಿಣಿಯ ನಗುವ ಕಂಡು ಹರ್ಷ ಪಡುವ ಕನಸಲ್ಲಿ ದೂರದಿಂದ ಹೆಣ್ಣು ಗಿಣಿಯನ್ನು ಕಾನ ಹೊರಡಿತ್ತು ಗಂಡು ಗಿಣಿಯು, ಆದರೆ ಹಳತನ್ನು ಮರೆಯದೆ ಮುದುರಿ ದುಖಃದಿಂದ ತುಂಬ ದಿನಗಳ ಕಾಲ ಕಂಬನಿ ಮಿಡಿದಿತ್ತು ಹೆಣ್ಣು ಗಿಣಿಯು, ತಾನು ನಗುವ ಬಯಸುವ ಕಂಗಳಲ್ಲಿ ಕಂಬನಿ ಕಂಡು ಕಾರಣ ಕೇಳ ಹೊರಟಿತ್ತು ಗಂಡು ಗಿಣಿಯು, "ತನ್ನ ಕಂಬನಿಗೆ ನೀನೆ ಕಾರಣ, ನಿನ್ನ ಹಗಲಿಕ್ಕೆಯೆ ಅದಕ್ಕೆ ಪರಿಹಾರ ನನ್ನ ಮರೆತ್ತು ತೊಲಗು" ಎಂದು ದೂಷಿಸಿತ್ತು ಹೆಣ್ಣು ಗಿಣಿಯು, ನಗಿಸಲು ಬಯಸಿ ಕಂಬನಿ ತರಿಸಿದಕ್ಕೆ ನೊಂದು ಮರುಳಿತ್ತು ಗಂಡು ಗಿಣಿಯು ಕೊನೆಯದಾಗಿ ಆ ಹೆಣ್ಣು ಗಿಣಿಯ ಕಂಗಳ ಕಂಡು, ಮಬ್ಬು ಮುಂಜಾವಿನಲ್ಲಿ ಕಂಗಳ ಹೊಸಕ್ಕುತ್ತ ಗೂಡಿನಿಂದ ಹೊರಬಂದ ಹೆಣ್ಣು ಗಿಣಿಗೆ ಕಾದಿತ್ತೊಂದು ಜೀವಮಾನದ ಅಚ್ಚರಿ, ನೆನೆ ಮರಳಿಹೋದ ಗಂಡು ಗಿಣಿಯು ಕೊನೆಯುಸಿರೆಳೆಯುತ್ತ ಬಿದಿತ್ತು ತಾನ್ನ ಪಾದದಡ್ಡಿ, ವಿಷದ ಹಣ್ಣನ್ನೂ ತಿಂದೂ ತನ್ನೋಂದ್ದು ರೆಕ್ಕೆಯ ಮೇಲೆ ತನ್ನ ಕೊನೆಯಾಸೆಯ ಬರೆದು ಕೊನೆಯುಸೆರಳೆಯುತ್ತಾ ಬಿದಿತ್ತು ಗಂಡು ಗಿಣಿ, ರೆಕ್ಕೆಯ ಸರಿಸಿದ್ದಾಗ ಕಂಡಿದ್ದು " ಕ್ಷಮಿಸು ಓ ಹುಡುಗಿ ನನ್ನ ಮನದಾಸೆಯ ತಿಳಿಸಿ ನಿನಗೆ ದುಖಃವನಿತ್ತೆ, ನಗುವನ್ನು ಕಾಣಲು ಬಯಸಿದ ಕಂಗಳಲ್ಲಿ ಕಂಬನಿಗಳ ತರಿಸಿದೆ, ನನ್ನ ಹಗಲಿಕ್ಕೆಯೆ ನಿನಗೆ ಖುಷಿಯನ್ನಿತ್ತುವುದಾದರೆ ಇಗೊ ನಾನು ಹೊರಡುತ್ತಿರುವೆ ಎಂದೂ ಬಾರದ ಆ ಊರಿಗೆ, ಅದರೆ ಇಹುದೊಂದು ಕೊನೆಯ ಆಸೆ, ನಿನ್ನ ಜೊತೆ ಜೀವನವನ್ನಾದರೂ ಕೆಳೆಯಲಿಲ್ಲ ಕೊನೆ ಪಕ್ಷ ಮರಣ್ಣವನ್ನಾದರೂ ಕರುನಿಸು ನಿನ್ನ ಮಡಿಲಲ್ಲಿ ಇಂತಿ :- ನಥದೃಷ್ಟ", ಇಷ್ಟು ಓದಿ ಕಂಬನಿಯನ್ನು ಮಿಡಿಯುತ್ತ ಮಡಲಿಗೇಳೆದು ಕೊಂಡಿತ್ತು ಗಂಡು ಗಿಣಿಯ, ಇಷ್ಟು ಹೊತ್ತು ಕಾದು ನಿಂತ್ತು, ತಕ್ಷಣ ಹಾರಿ ಹೊಯಿತ್ತು ಗಂಡು ಗಿಣಿಯ ಪ್ರಾಣ...
:-ಒಂಟಿ ಬಾನಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...