ಶುಕ್ರವಾರ, ಮಾರ್ಚ್ 16, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |20|


ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? |
ಚಂಡಚತುರೋಪಾಯದಿಂದಲೇನಹು­ದು?||
ತುಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು|
ಅಂದಲೆತವಿದಕೇನೊ ? - ಮಂಕುತಿಮ್ಮ |೨೦|


ತಾತ್ಪರ್ಯ :-
ನಮ್ಮ ಮನೋಭಿಲಾಷೆಗೋಸ್ಕರ ಕಂಡ ಕಂಡ ದೇವರುಗಳಿಗೆಲ್ಲ ಕೈ ಮುಗಿಯುತ್ತೇವೆ,
ನಮ್ಮ ಸ್ವಾರ್ಥಕ್ಕೋಸ್ಕರ ವಿವಿಧ ನಿಪ್ಪುನ ಉಪಾಯಗಳನ್ನು ನಡೆಸುತ್ತೇವೆ,
ಇವೆಲ್ಲವು ಏತಕಾಗಿ, ತಿನ್ನಲು ಹಿಡಿ ಅನ್ನ, ಉಡಲು ತುಂಡು ಬಟ್ಟೆ ಮಾತ್ರ ಸಾಕಲವೆ ಮನುಷ್ಯ ಜೀವನಕ್ಕೆ, ಇದನ್ನು ಅರಿತರೆ ನೆಮ್ಮದಿ ಇಹುದು ನಮ್ಮ ಮನಕ್ಕೆ. 

                                                                                            :- ಡಿ.ವಿ.ಜಿ

Abstraction In English :- 

 We pray to different Gods to fulfill our wishes,
We create evil plans to achieve our desires,
Why do we do all these, when we just need a plate of food to survive, and a piece of cloth to cover us, when we understand this, Our Mind Attains piece. 

                                                                                               :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...