ಸೋಮವಾರ, ಮಾರ್ಚ್ 12, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |14|


    ಒಂದೆ ಗಗನವೆ ಕಾಣುತೊಂದೆ ನೆಲವನು ತುಳಿಯು|
ತೊಂದೆ ಧಾನ್ಯವನುಣ್ಣುತೊಂದೆ ನೀರ‍್ಗುಡಿದು ||
ಒಂದೆ ಗಾಳಿಯನುಸಿರ‍್ವ ನರಜಾತಿಯೊಳಗೆಂತು|
ಬಂದುದೀ ವೈಷಮ್ಯ? - ಮಂಕುತಿಮ್ಮ  |೧೪|

ತಾತ್ಪರ್ಯ:-
ಈ ಪ್ರಪಂಚದಲ್ಲಿರುವ ಜನಗಳೆಲ್ಲವು ಉಸಿರಾಡುವ ಗಾಳಿ, ಓಡಾಡುವ ನೆಲ, ಕುಡಿಯುವ ನೀರು ಮತ್ತು ನೋಡುವ ಆಕಾಶ - ಇವುಗಳು ಒಂದೇ ಆಗಿರಲು, ನರ-ನರರ ನಡುವೆ ದ್ವೇಷ-ವಿರಸಗಳು ಹೇಗೆ ಉಂಟಾಯಿತೋ (ವೈಷಮ್ಯ) ತಿಳಿದಿಲ್ಲ.
                                                                                     :- ಡಿ.ವಿ.ಜಿ


Abstraction In English:-


Even Though we all Breath The Same Air, Walk On The Same Ground, Drink The Same Water and See The Same Sky- Everything we use are all Same, But Dont Know How Did This Hatred Enter Into These People Mind 
                                                                                      :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...