ಸೋಮವಾರ, ಮಾರ್ಚ್ 26, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |35|

ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದ ಕುಂದಲ್ತೆ ? - ಮಂಕುತಿಮ್ಮ |೩೫|
 
ತಾತ್ಪರ್ಯ :-
ಬಹಳಷ್ಟು ಕಾಲ ಯೋಚನೆ ಮಾಡಿ, ಕೆಲಸವನ್ನೂ ಮಾಡಿ, ಈ ಜಗತ್ತನ್ನು ಬ್ರಹ್ಮ ಸೃಷ್ಟಿ ಮಾಡಿದ. ಅವನು ಅಷ್ಟು ಕಾಲ ಕಳೆದು ಕಷ್ಟಪಟ್ಟು ರಚಿಸಿ ನಿರ್ಮಿಸಿದ್ದನ್ನು, ಒಬ್ಬ ಮನಷ್ಯ ಅರ್ಥಮಾಡಿಕೊಂಡು ಬಿಟ್ಟರೆ , ಇದನ್ನು ರೂಪಿಸಿದ ಅವನ ಹೆಚ್ಚಗಾರಿಕೆಗೆ, ಒಂದು ಕೊರತೆ ಉಂಟಾಗುತ್ತದಲವೆ? ಅದುದ್ದರಿಂದಲೇ ಈ ಸೃಷ್ಟಿಯ ರಹಸ್ಯವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳವ ಶಕ್ತಿಯನ್ನು ಅವನು ನಮಗೆ ಕೊಡಲಿಲ್ಲ. :- ಡಿ.ವಿ.ಜಿ

Abstraction In English:-
The creater of this world might have thought a lot, and would have worked hard to create this world, If a common human understands his creation, which he created with so much trouble, wouldn't it effect his domination on us, So he never gave us the capabilities of understanding his creations completely. :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...