ಸೋಮವಾರ, ಮಾರ್ಚ್ 26, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |27|

ಧರೆಯ ಬದುಕೇನದರ ಗುರಿಯೇನು ಫಲವೇನು ?|
ಬರಿ ಬಳಸು ಬಡಿದಾಟ ಬರಿ ಪರಿಭ್ತಮೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಿಪುದೇನು ? - ಮಂಕುತಿಮ್ಮ |೨೭|

ತಾತ್ಪರ್ಯ:-
ಈ ಪ್ರಪಂಚದಲ್ಲಿ ಬದುಕಿನ ಉದ್ದೇಶ ಮತ್ತು ಪ್ರಯೋಜನಗಳೇನು ? ಇವು ವ್ಯರ್ಥವಾದ ಕೇವಲ ಓಡಾಟ, ಹೊಡೆದಾಟ ಮತ್ತು ತೊಳಲಾಟಗಳು ಮಾತ್ರವೇ? ಸುತ್ತಿ ಸುತ್ತಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳವ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚಿನದೇನನ್ನಾದರೂ ಮನಷ್ಯನು ಸಾಧಿಸುತ್ತಾನೆಯೊ? :- ಡಿ.ವಿ.ಜಿ

Abstraction In English :-
In this world what is the meaning and worth of life,
Is it just useless fights, confusions and roaming like wild animals. If your just roaming everywhere and eating food like an animal what makes you different from those birds and animals. What have you gained unlike them :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...