ಗುರುವಾರ, ಮಾರ್ಚ್ 22, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |23|

ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು |
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ||
ಮರಳಿ ಕೊರಗಾಡುವುದು ಕೆರಳುವುದು ನರಳುವುದು |
ಇರವಿದೇನೊಣರಗಳೆ ? - ಮಂಕುತಿಮ್ಮ |೨೩|
ತಾತ್ಪರ್ಯ :-
ಎಲ್ಲೆಲ್ಲಿಯೊ ಓಡಾಡಿ ಸುಸ್ತಾಗುವುದು, ಭಿಕ್ಷೆ ಬೇಡಿ ಅನ್ನವನ್ನು ತಿನ್ನುವುದು. ಇಷ್ಟೆಲ್ಲ ಮಾಡಿದರೂ, ವೈಭವದ ಪ್ರದರ್ಶನ ಮಾಡಿ ಮೈಮರೆಯುವುದು. ಇನ್ನೊಬ್ಬರ ಹತ್ತಿರ ಹೋಗಿ ಹಲ್ಲು ಗಿಂಜುವುದು. ಪುನಃ ವೈಥೆ ಪಡುವುದು, ಕೋಪಿಸಿಕೊಳ್ಳುವುದು, ಇನ್ನೊಬ್ಬರ ಮೇಲೆ ರೇಗುವುದು. ಮೇಲಿನದೆಲ್ಲವನ್ನೂ ಮಾಡಿದರೂ, ನಾವು ಎಣಿಸಿದಂತಾಗದಾಗ ಸಂಕಟ ಪಡುವುದು, ಏಕೀ ಕೆಲಸಕ್ಕೆ ಬಾರದ ರಗಳೆ 
:- ಡಿ.ವಿ.ಜಿ
Abstraction In English:-
Getting Tired by Roaming Here and There, Having Food by Begging in Streets.
 After all this, Showing off in front of others, Pleading them for help when needed,when every thing doesn't go well, again suffering with grief, fighting and shouting on other, why do we need this all worthless jobs, just remain calm and execute you karma 
:- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...