ಗುರುವಾರ, ಮಾರ್ಚ್ 22, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |26|

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗಯಣಗಳೊಂದು ಕಡೆ ||
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ | ೨೬|

ತಾತ್ಪರ್ಯ :-
ಈ ಸೃಷ್ಟಿಯ ಉದ್ದೇಶವಾದರೂ ಏನು ? ಅದು ಸ್ಪಷ್ಟವಾಗಿಲ್ಲ. ಸರಿಯಾಗಿ ತಿಳಿದುಕೊಳ್ಳಲಿಕ್ಕಾಗುವ­ುದಿಲ್ಲ. ಅದರ ಜೊತೆಗೆ ಅದು ಬಹಳ ತೊಡಕಾದದ್ದೂ ಹೌದು. ಒಂದು ಕಡೆಯೋ ನಮಗೆ ಪ್ರೀತಿಪಾತ್ರವಾಗುವ ಮತ್ತು ಮರುಳುಗೊಳಿಸುವ, ಸುಂದರವಾದ ಸ್ವಭಾವಗಳು. ಮತ್ತೊಂದು ಕಡೆ ಕಠಿಣ ಮತ್ತು ಅಸಹ್ಯವಾಗಿರುವ ಭಯಂಕರಗಳು. ಈ ರೀತಿಯಾಗಿ, ಈ ಬ್ರಹ್ಮಸೃಷ್ಟಿ ಅರ್ಥ ಮಾಡಿಕೊಳ್ಳವುದಕ್ಕೆ ಬಹಳ ಕಷ್ಟಕವಾದದ್ದು. :- ಡಿ.ವಿ.ಜಿ 
Abstraction In English :-
No one knows exactly the reason behind this creation, Even if some one tries to find its very difficult. At one end stands our loved ones with their beautiful behaviour and at the other end stands people with ruthless and execrable behaviours, By this the creation of Lord becomes the most Complicated Creation to understand :- D.V.G

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...