ಒಂಟಿ ಬಾನಾಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಒಂಟಿ ಬಾನಾಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 13, 2023

ಅರ್ಚಿಸಲು ಬರೆದ ಸಾಲುಗಳು ಅಳೆದವು

 


                  

            ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.

            ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ಒಂದನ್ನೂ ಮುಡಿಯಲೇ ಇಲ್ಲ. 

            ಹಂಬಲಿಸಿದೆ ಹೃದಯವು ನಿನ್ನ ಸೇರಲು, ನೀ ಒಮ್ಮೆಯೂ ಕೇಳಿಸಿಕೊಳೆಲೇ ಇಲ್ಲ. 

            ನಿನಗೆಂದೆ ಜಾರಿದೆ ಈ ಕಣ್ಣ ಕಂಬನಿ ನೀನೆಂದಿಗೂ ನೋಡಲೇ ಇಲ್ಲ …!

                                                                 :~ ಒಂಟಿ ಬಾನಾಡಿ 🕊

ಸೋಮವಾರ, ಸೆಪ್ಟೆಂಬರ್ 11, 2023

ಒಂದೇ ಮನುಜನ ಮನದಲ್ಲಿರುವರು ರಾಮ ರಾವಣರಿಬ್ಬರು


ಒಬ್ಬ ತಂದೆಯ ಮಾತಿಗೆ ಕಾಡಿಗೆ ಹೋರಾಟ 

ಇನ್ನೊಬ್ಬ ತನ್ನ ಸ್ವಾರ್ಥಕ್ಕೆ ಮಗನ ಬಲಿ ಕೊಟ್ಟ ।


ಒಬ್ಬ ಹೆಣ್ಣಿನ ಮೋಸಕ್ಕೆ ಬಲಿಯಾಗಿ ತನ್ನ ರಾಜ್ಯವ ಬಿಟ್ಟ 

ಇನ್ನೊಬ್ಬ ಹೆಣ್ಣಿನ ಮೋಹಕ್ಕೆ ಬಲಿಯಾಗಿ ತನ್ನ ಪ್ರಣಯನ್ನೇ ಬಿಟ್ಟ ।


ನೊಂದ ಹೆಣ್ಣ ಶಾಪ ವಿಮೋಚಿಸಿ, ಕೊಟ್ಟ ಎಂಜಲ ತಿಂದು ಸವಿದವನೊಬ್ಬನಾದರೆ 

ಇಷ್ಟವಿಲ್ಲದಿದ್ದರು ವ್ಯಾಮೋಹಿಸಿ, ತನ್ನವರಿಂದ ದೂರವಿರಿಸಿ ಸ್ವಾರ್ಥದಿಂದ ಮೆರೆದವ ಇನ್ನೊಬ್ಬನಾದನೆ ।।


ಇಬ್ಬರಲ್ಲೂ ಧರ್ಮ ಅಧರ್ಮವ ಹುಡುಕುವ ಓ ಮನುಜ, ನೀ ಮೊದಲು ತಿಳಿಯೇ 


ಇಬ್ಬರೂ ಹೆಣ್ಣಿಗೆ ನೋವ ನೀಡಿದವರೇ 

ಇಬ್ಬರೂ ಜಗ ಮೆಚ್ಚುವಂತೆ ರಾಜ್ಯವಾಳಿದವರೇ ।


ಇಬ್ಬರು ಭಕ್ತರೇ ಅವರವರ ಇಷ್ಟ ದೈವಕ್ಕೆ 

ಇಬ್ಬರು ಧೂಷಿತರೇ ಅವರವರ ಶತೃ ರಾಷ್ಟ್ರಕ್ಕೆ ।


ಇಬ್ಬರಲ್ಲೂ ಧರ್ಮ ಅಧರ್ಮವ ಹುಡುಕುವ ಓ ಮನುಜ, ನೀ ಮೊದಲು ತಿಳಿಯೇ 

ಧರ್ಮ ಅಧರ್ಮವದು ಯಾವದೋ ಧೈವ ರಾಕ್ಷಸರಲಿಲ್ಲ, ನಿನ್ನದೇ ಮನದ ಭಾವನೆಗಳವು ಅರಿಯೇ ।।

 

ಒಂದೇ ಮನುಜನ ಮನದಲ್ಲಿರುವರು ರಾಮ ರಾವಣರಿಬ್ಬರು

ಇನ್ನೋರ್ವರ ಪ್ರಶ್ನಿಸುವ ಮುನ್ನ, ನೀ ಕೇಳಿಕೊ ನಿನ್ನ, ನಿನ್ನ ಮನದೊಳಗಿರುವವರಾರು 

ರಾಮನೇ, ರಾವಣನೇ …?


:~ ಒಂಟಿ ಬಾನಾಡಿ 


 

ಮರುಗದಿರು ಮನವೇ ಎಲ್ಲಿಯೂ ಹೋಗನೆ ನಾನು, ನಿನ್ನ ಬಿಟ್ಟು


ಮರುಗದಿರು ಮನವೇ ಎಲ್ಲಿಯೂ ಹೋಗನೆ  ನಾನು ನಿನ್ನ ಬಿಟ್ಟು, ನೀನೆ ಅಟ್ಟುವವರೆಗೂ ನನ್ನ ಕುತ್ತಿಗೆ ಹಿಡಿದು

 

ಸಲಿ ರಾತ್ರಿಯಲ್ಲಿ ಮಗ್ಗುಲ ಮುರಿವಾಗ ತಾಯಿಯ ಸೆರಗ ಹುಡುಕುವ ಕಂದಮ್ಮನಂತೆ ಬೆದರದಿರು ನೀನು

ಕಂದನ ಬೆನ್ನ ತಟ್ಟಿ ಸಮಾಧಾನಿಸುವ ತಾಯಿಯಂತೆ ಮತ್ತೆ ಬರುವೆನು ನಾನು ।।


ಗುಂಪಲ್ಲಿ ಕಳೆದು ಹೋದ ಸಣ್ಣ ಕರುವಂತೆ ವಿಚಲಿತಳಾಗದಿರು ನೀನು 

ಎಷ್ಟೇ ದೂರವಿದ್ದರು ಹುಡುಕಿ ಬಂದು ಕುತ್ತಿಗೆ ನೆಕ್ಕಿ ಮಮತೆ ತೋರುವ ಹಸುವಂತೆ ಮತ್ತೆ ಬರುವೆನು ನಾನು ।।


ಜಾತ್ರೆಯಲ್ಲಿ ಕಳೆದು ಹೋದ ಮಗುವಂತೆ ಓಬಳೇ ಕಣ್ಣೀರ ಸೂಸದಿರು ನೀನು 

ಹಲವಾರು ಸಲ ಅನುಭವಿಸಿರುವೆ ಅಹ್ ನೋವನ್ನು, ತಿಳಿದೂ ನಿನಗೆ ಅದನ್ನೆಂದೂ ನೀಡೆನು ನಾನು  ।।


ಸುಡು ಬಿಸಿಲ ಕಾವಿಗೆ ಬಾಯ್ತೆರೆದು ಭವನಿಸಬೇಡ ನೀನು 

ಎಷ್ಟೇ ಅಮಾವಾಸ್ಸೆಗಳು ಕಳೆದರೂ, ಮತ್ತೆ ಹುಣಿಮೆಗೆ ಬಂದು ತಂಪನೀವ ನಿನ್ನ ಚಂದಿರನು ನಾನು  ।।


ಮರುಗದಿರು ಮನವೇ ಎಲ್ಲಿಯೂ ಹೋಗನೆ  ನಾನು ನಿನ್ನ ಬಿಟ್ಟು, ನೀನೆ ಅಟ್ಟುವವರೆಗೂ ನನ್ನ ಕುತ್ತಿಗೆ ಹಿಡಿದು… 


:- ಒಂಟಿ ಬಾನಾಡಿ



 

ಭಾನುವಾರ, ಸೆಪ್ಟೆಂಬರ್ 10, 2023

ಕಿವಿಯಲ್ಲೇ ಗುಣುಗುತ್ತಿರುವುದು ನಿನ್ನದೇ ಮಾತು ಅನುಕ್ಷಣವೂ


ಕಿವಿಯಲ್ಲೇ  ಗುಣುಗುತ್ತಿರುವುದು ನಿನ್ನದೇ ಮಾತು ಅನುಕ್ಷಣವೂ 

ಸದಾ ಗುಯ್ ಗುಟ್ಟುವುದು ಮನದಲ್ಲಿ ನಿನ್ನದೇ ಹುಸಿ ನಗುವೂ 

ಹಾತೊರೆಯುವ ಕಡಲಿಗೆ ಜೋ ಎಂದು ಸುರಿವ ಮಳೆಯಂತಿದೆ ನಿನ್ನ ನುಡಿಯೂ  

ಕಾದು ಬರಡಾಗಿರುವ ಒಣ ಭೂಮಿಗೆ ತಂಪ ಎರೆವಂತಿದೆ ನಿನ್ನ ಒಲವೂ 

ಎಷ್ಟೇ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸಿದೆ ಮಧುರವಾದ ನಿನ್ನ ಧನಿಯೂ

ಎಷ್ಟೇ ದೂರಕ್ಕೆ ಹೋದರೂ ಮತ್ತೆ ಧಡದೆಡೆಗೆ ಸೇರುವ ಅಲೆಯಂತಿದೆ ನಿನ್ನ ಸನಿಹವೂ

:- ಒಂಟಿ ಬಾನಾಡಿ

 

ಶನಿವಾರ, ಸೆಪ್ಟೆಂಬರ್ 9, 2023

ನನ್ನ ಸಮುದ್ರ ನೀನು

 


ನೂರಾರು ಜನ್ಮವೆತ್ತಿದ್ದರು ನಿನಗಾಗೆ ದುಮ್ಮಿಕ್ಕಿ ಹರಿಯುವ ನದಿಯು ನಾನು ।

ಪ್ರತಿ ಜನ್ಮದಲ್ಲೂ ನನನ್ನೇ ಸೇರಲು ಹಂಬಲಿಸುವ ನನ್ನ ಸಮುದ್ರ ನೀನು   ।।

ಬೆಟ್ಟ ಗುಡ್ಡ ತೊರೆಯಾಗಿ ಹರಿದು ಬರುವ ನದಿಯು ನಾನು ।

ಎಷ್ಟೇ ವೈವಿಧ್ಯಮಯ ಜೀವವಿದ್ದರೂ ನನಗಾಗೇ ಹಾತೊರೆಯುವ ನನ್ನ ಸಮುದ್ರ ನೀನು ।।

ಭೂಮಿಯೇ ಬಿರಿದು ಜೀವ ಸಂಕುಲವ ನಶಿಶಿ ಹರಿಯುವ ನದಿಯು ನಾನು ।

ಸಾವಿರ ಜೀವ ಸಂಕುಲಗಳ ಜೊತೆ ನನನ್ನೂ ಸ್ವಾಗತಿಸುವ ನನ್ನ ಸಮುದ್ರ ನೀನು ।।

ಎಷ್ಟೇ ಸಲ ಸೋತರು ನಿನಗಾಗೆ ಮತ್ತೆ ಮತ್ತೆ ಹುಟ್ಟಿ ಬರುವ ನದಿಯು ನಾನು ।

ಎಷ್ಟೇ ಯುಗಗಳು ಕಳೆದರೂ ತಾಳ್ಮೆಯಿಂದ ಕಾದಿರುವ ನನ್ನ ಸಮುದ್ರ ನೀನು ।।

:- ಒಂಟಿ ಬಾನಾಡಿ



ಕಾಲದ ಕೈಗೊಂಬೆ (ಮನುಜ) ರೈಲು ಬಂಡಿ



ಬಾಳ ಪಯಣದಿ ಗರ್ವ ತೋರಿ ಹೂಳಿಡುವುದು ರೈಲು ಬಂಡಿ 

ತಾನೇ ಶಕ್ತಿಶಾಲಿ, ತನ್ನ ಅಬ್ಬರಕ್ಕೆ ಸರಿಸಾಟಿ ಇಲ್ಲ ಎಂದು ಗರ್ವ ಪಡೆವುದು ರೈಲು ಬಂಡಿ 

ಅಡ್ಡ ಬಂದವರೆಲರ ಮೆಟ್ಟಿ ಕಾಲ್  ಅಡಿಯಲ್ಲಿ ಹೊಸಕಾಕುವೆ ಎಂದು ಬೀಗುವುದು ರೈಲು ಬಂಡಿ 

ಇಡೀ ಭೂಮಿಯನ್ನೇ ಸುತ್ತಿ ಬಿಡುವೆ ಧಣಿವಾರಿಹದೆ ಎಂದು ಛಲವ ಮೆರೆವುದು ರೈಲು ಬಂಡಿ 


ಆದರೆ ಶಕ್ತಿಶಾಲಿ ರೈಲು ಬಂಡಿಗೇನು ಗೊತ್ತು 


ಮೇಲೆ ಕೂತಿರುವ ಚಾಲಕನಿಲ್ಲದೆ ಒಂದಿಂಚು ಅಲುಗಾಡದು ರೈಲು ಬಂಡಿ 

ದಾರಿಯಲ್ಲಿ ಯಾರೋ ಎಡಕ್ಕೆ ಬಲಕ್ಕೆ ತಿರುಗಿಸಿದೆಡೆಗೆ ನಡೆಯುವುದೇ  ರೈಲು ಬಂಡಿ 

ಎಷ್ಟೇ ಶಕ್ತಿಶಾಲಿಯಾದರೂ ಇನ್ನೊಬ್ಬರ (ಕಾಲದ ) ಕೈಗೊಂಬೆ ರೈಲು ಬಂಡಿ


ಮನುಜನು ಹೀಗೆ ರೈಲು ಬಂಡಿಯಾ ಹಾಗೆ, ಕಾಲದ ಕೈಗೊಂಬೆಯೇ ಸರಿ 


:- ಒಂಟಿ ಬಾನಾಡಿ



ಶನಿವಾರ, ಡಿಸೆಂಬರ್ 14, 2019

ಹುಡುಗಿರು ರಾಣಿ ಆಗ್ಬೇಕಾದ್ರೆ ಹೀಗೆ ಮಾಡಬೋದಪ್ಪ


ಒಬ್ಬ ಹುಡುಗ ರಾಜನಾಗೊಕ್ಕೆ ರಾಜ್ಯನೇ ಆಳಬೇಕಿಲ್ಲ 
ವಿಶಾಲವಾದ ಮನಸಿದ್ರೆ ಸಾಕು. 
ಒಬ್ಬ ಹುಡುಗಿ ರಾಣಿಯಾಗಬೇಕೆಂದ್ರೆ ರಾಜನ ಮಗಳಾಗೆ ಹುಟ್ಟಬೇಕಿಲ್ಲ 
ಒಬ್ಬ (ನನ್ನಂತಹ) ರಾಜನನ್ನ ಮದುವೆ ಆದ್ರೂ ಸಾಕು. 😜 
:- ಒಂಟಿ ಬಾನಾಡಿ

ಸಂತಸದ ಹಣ್ಣು ಹಾಗು ದುಃಖದ ಹೋರೆ


ಸಂತಸದ ಹಣ್ಣನ್ನು ಎಂದೂ ಹಂಚಿಕೊಂಡು ತಿನ್ನಬೇಕು. 
ದುಃಖದ ಹೊರೆಯನ್ನು ಎಂದೂ ಒಬ್ಬರೇ ಹೊರಬೇಕು. 
 ಏಕೆಂದರೆ, ಸಂತೋಷವನ್ನು ಹಂಚಿಸಿದಷ್ಟು ವೃದ್ಧಿಸುತ್ತದೆ, 
 ದುಃಖವನ್ನು ಹಂಚಿಸಿದಷ್ಟು ಇನ್ನೊಬ್ಬರಿಗೆ ಹೊರೆಯಾಗುತ್ತದೆ.
:- ಒಂಟಿ ಬಾನಾಡಿ 

ನಗುವಾಗ ಎಲ್ಲರ ಜೊತೆ ಕೂಡಿ ನಗಬೇಕು



ನಗುವಾಗ ಎಲ್ಲರ ಜೊತೆ ಕೂಡಿ ನಗಬೇಕು.
ಅಳುವಾಗ ಒಬ್ಬಂಟಿಯಾಗೆ ಅಳಬೇಕು. 
ಏಕೆಂದರೆ, ಒಬ್ಬರೆ ನಕ್ಕರೆ ಹುಚ್ಚನೆನ್ನುವರು, 
ಇನ್ನೊಬ್ಬರ ಮುಂದೆ ಅತ್ತರೆ, ನಮ್ಮ ದುಃಖವನ್ನು ದೌರ್ಬಲ್ಯವೆಂದು ತಿಳಿಯುವರು. 
:- ಒಂಟಿ ಬಾನಾಡಿ

ಶಿಕ್ಷಕರೆಂದರೆ ಯಾರು


ಶಿಕ್ಷಕರೆಂದರೆ ಬರಿ ತಪ್ಪುನ್ನು ಕಂಡಾಗ ಶಿಕ್ಷಿಸಿ ಮುಂದೆ ತಳ್ಳುವ ಕಟುಕರಲ್ಲ, 
ಕೇವಲ ಪುಸ್ತಕದ ತಿರುಳನ್ನು ಮಸ್ತಕದಿ ತುಂಬವ ಯಂತ್ರವಲ್ಲ, 
ತಪ್ಪು ಹೆಜ್ಜೆಗಳನ್ನಿಟ್ಟಾಗ ತಿದ್ದಿ ನಡೆಸುವ ಬಂಧುಗಳವರು, 
ಸ್ವಾರ್ಥವಿಲ್ಲದೆ, ಭೇದ ಭಾವವಿಲ್ಲದೆ ಸಮನಾಗಿ ವಿದ್ಯೆ ಹಂಚುವ ಪಾಲಕರವರು. 
ಹೆಸರು ,ಆಡಂಬರ ಬಯಸದೆ ತನ್ನ ವಿದ್ಯಾರ್ಥಿಗಳ ಏಳಿಗೆ ಬಯಸುವ ನಿಸ್ವಾರ್ಥಿಗಳವರು. 
ನಿಸ್ವಾರ್ಥದಿಂದ ಜ್ಣಾನವನ್ನು ಲೋಕಕ್ಕೆ ಹಂಚುತ್ತಿರುವ ಪ್ರತಿಯೊರ್ವ ಶಿಕ್ಷಕರಿಗೂ ಈ ಕವನ ಅರ್ಪಣೆ  
:- ಒಂಟಿ ಬಾನಾಡಿ 📝🕊

ಕರ್ಮದ ಹಕ್ಕು


ನಮಗೆ ಹಕ್ಕಿರುವುದು ಕೇವಲ ನಮ್ಮ ಇಂದಿನ ಕರ್ಮಗಳಲ್ಲಿ ಮಾತ್ರಾ,
ಏಕೆಂದರೆ ನಮ್ಮ ಗುರಿಯನ್ನು ಆಳುವವರು ನಾವಲ್ಲ , ಕೇವಲ ನಾವು ಮಾಡಿದ ಕರ್ಮ
:- ಒಂಟಿ ಬಾನಾಡಿ 🕊📝

ನೀ ಕೊಟ್ಟಷ್ಟೆ ಪ್ರೀತಿಯ


ನೀ ಕೊಟ್ಟಷ್ಟೆ ಪ್ರೀತಿಯ ಅವರೂ ಕೊಡಬೇಕ್ಕೆನ್ನಲು ಪ್ರೀತಿ ವ್ಯವಹಾವರಲ್ಲ,
ಕೊಡುವುದಷ್ಟೆ ಪ್ರೀತಿ, ಬಯಸುವುದು ಮೋಹ !!!
:- ಒಂಟಿ ಬಾನಾಡಿ

-------------------------------------------------------------------------------------------------------------------------

Love is not a Business, 
To expect the same amount of love 
from the one whom you love the most,
Love is something which you give & 
Business is some thing which you expect as returns!!!
:- BKOB

Don't be as flexible as water



Don't be as flexible as water to every one, 
some may use you to wash there #SS 
Be as hard as Gold 
so that many dream of keep you on there 
HEAD as CROWN
:- BKOB

ತನ್ನವರಾರು ಇಲ್ಲದವ ಅನಾಥನಲ್ಲ,


ತನ್ನವರಾರು ಇಲ್ಲದವ ಅನಾಥನಲ್ಲ, 
ತನ್ನವರೆಲ್ಲರೂ ಇದ್ದರು 
ಒಬ್ಬಂಟಿಯಾಗಿ ಉಳಿವವ ನಿಜವಾದ ಅನಾಥ... :
- ಒಂಟಿ ಬಾನಾಡಿ 🕊📝

ಯಾರೆ ನಿಂತರೂ, ನಿಲ್ಲದೆ ಸಾಗುವುದೆ ಕಾಲದ ನಿಯಮವು





ಯಾರೆ ನಿಂತರೂ, ನಿಲ್ಲದೆ ಸಾಗುವುದೆ ಕಾಲದ ನಿಯಮವು, 
ಕಾಲವುರುಳಿದರೂ ಅಲಿಯಾದೆ ನಿಂತಿಹಿಯೆ ನಾನ್ನಿಂದೂ, 
ಅಂದಿದ ನನ್ನಲಿದ ಪ್ರೀತಿಯು ಹಾಗೆಯೆ ಉಳಿದಿದೆ, 
ಅಂದಿದ ದಾರಿಯು ಇಂದಿಗೂ ಉಳಿದಿದೆ, 
ಬದಲಾಗಿರುವುದೆ ಒಂದೆ ಒಂದು, 
ಅದು ನೀನ್ನಿದ ಜಾಗವು, ಅದು ಅಂದಿಗೂ ಅಛಲ, ಇಂದು ನಿಷ್ಛಲ 
:- ಒಂಟಿ ಬಾನಾಡಿ 

ನೀ ನಡೆದ ದಾರಿಗಳೆಲ್ಲ


ನೀ ನಡೆದ ದಾರಿಗಳೆಲ್ಲ ಇಂದು ನೆನೆಪುಗಳ ಅಂದರ, 
ನೆನಪುಗಳ ಹಾದಿಗಳಲ್ಲಿ ನಡೆದಾಗಳೆಲ್ಲ ಮನದಲ್ಲಿ,
ಪುನರುದ್ಗರಿಸಿದೆ ಒಲವಿನ ಮಂದಿರ 
:- ಒಂಟಿ ಬಾನಾಡಿ

ಬದುಕು ಜಟಕ ಬಂಡಿ



ಜೀವನವೊಂದು ಜಟಕ ಬಂಡಿ
ಮನಸೇ ಅದರ ಸಾಹೆಬ
ಚಿಂತನೆಗಳೆ ಅದರ ಕುದುರೆ
ನಂಬಿಕೆ, ಆತ್ಮವಿಶ್ವಾಸವೆ ಅದರ ಎರಡು ಚಕ್ರಗಳು
ಆದರ್ಶ, ಸ್ವಾಬಿಮಾನವೇ ಎರಡು ಕೊಂಡಿಗಳು
ಎಲ್ಲಾ ಸೆರಿ ನಡೆದರೆ ಸುಖಕರ ಜೀವನದ ಪಯಣ
ಸಲ್ಪ ಎಡವಟ್ಟಾದರೂ ಪಯಣಕ್ಕೆ ವಿರಾಮವೇ||
:- ಒಂಟಿ  ಬಾನಾಡಿ 

ಮಂಗಳವಾರ, ಮಾರ್ಚ್ 20, 2018

ನಿನ್ನೊಲವ ಬಿಕ್ಷೆಯ ಬೇಡಿ

ನಿನ್ನೊಲವ ಬಿಕ್ಷೆಯ ಬೇಡಿ ಬಂದಿರುವ ಬಿಕ್ಷುಕ ನಾನು,
ದಯವಿಟ್ಟು ಒಲವ ಬಿಕ್ಷೆಯ ನೀಡು,
ನನ್ನ ಎದೆಯ ಮಂದಿರದಲ್ಲಿ, ನಿನ್ನ ಪೂಜಿಸುವ ಭಕ್ತ ನಾನು,
ದಯೆ ತೊರಿ ಪ್ರೀತಿಯ ವರವ ನೀಡು ನೀನು,
ನಿನ್ನ ಕಣ್ಣ ಕಣಿವೆಯಲ್ಲಿ ಸದಾ ಅಡಗಳಿಚ್ಚಿಸುವ ಕಾಡಿಗೆಯು ನಾನು,
ದಯವಿಟ್ಟು ಕಡೆಗಾಣಿಸಿ ಸರಿಸದಿರು ನೀನು,
ನಿನ್ನ ಕೆಂದುಟಿಯ ನಗುವಿನಲ್ಲಿ ಮಿಂಚುವ ಹೊಳಪು ನಾನು,
ದಯವಿಟ್ಟು ದುಗುಡದಲ್ಲಿ ಮಾಸದಿರು ನನ್ನನು,
ನಾ ಕಂಡಾಗಲೆಲ್ಲ ಬೆರೆ ಕಡೆ ಕಣ್ಣ ಸರೆಸುವ ನಾಚಿಕೆಯು ನಾ,
ಕಾಡದಿರು ಗೆಳತಿ,
ನಿನ್ನ ಕನಸಲ್ಲಿ ಬಯಸದೆ ಬರುವ ಪ್ರೀತಿಯ ಗೆಳೆಯನು ನಾ,
ಮರೆದಿರು ಗೆಳತಿ,
ನಿನ್ನ ಬಾಳಿನ ಪಯನವ ಹೆಜ್ಜೆಯಲ್ಲಿ ಸಹಯಾತ್ರಿಯುನಾ,
ಸಹಮತಿಸಿ, ಸಹಬಾಳ್ವಯ ನಡೆಸು ಗೆಳತಿ...
                    :- ಓಂಟಿ ಬಾನಾಡಿ

www.facebook.com/ontibaanaadi

ಶುಕ್ರವಾರ, ಮಾರ್ಚ್ 16, 2018

ನಿನ್ನ ಮುಂಗುರುಳ ಮುಂದೆ

ನಿನ್ನ ಮುಂಗುರುಳ ಮುಂದೆ ನನ್ನ ಮುಂಗುರುಳನ್ನಿಟ್ಟು,
ಕಣ್ಣಂಚಲ್ಲಿ ಕಾಣುವ  ಹುಸಿ ಖುಷಿಯ, ಕಣ್ಣಲ್ಲೆ ಸೆಳೆಯುತ್ತಾ,
ತುಟಿಯಂಚಲ್ಲಿ ಬಿರಿಯುವ ನಗುವ , ಜೇವನವಿಡೀ ಕಾಣು ಬಯಕೆ ನನ್ನದು,
ಓ ಗೆಳತಿ ನನ್ನ ಜೀವನದ ಒಡತಿ
                    :- ಒಂಟಿ ಬಾನಾಡಿ

ನಿನ್ನೊಲವ ಬಿಕ್ಷೆಯ ಬೇಡಿ ಬಂದಿರುವ ಬಿಕ್ಷುಕ ನಾನು

ನಿನ್ನೊಲವ ಬಿಕ್ಷೆಯ ಬೇಡಿ ಬಂದಿರುವ ಬಿಕ್ಷುಕ ನಾನು,
ದಯವಿಟ್ಟು ಒಲವ ಬಿಕ್ಷೆಯ ನೀಡು,
ನನ್ನ ಎದೆಯ ಮಂದಿರದಲ್ಲಿ, ನಿನ್ನ ಪೂಜಿಸುವ ಭಕ್ತ ನಾನು,
ದಯೆ ತೊರಿ ಪ್ರೀತಿಯ ವರವ ನೀಡು ನೀನು,
ನಿನ್ನ ಕಣ್ಣ ಕಣಿವೆಯಲ್ಲಿ ಸದಾ ಅಡಗಳಿಚ್ಚಿಸುವ ಕಾಡಿಗೆಯು ನಾನು,
ದಯವಿಟ್ಟು ಕಡೆಗಾಣಿಸಿ ಸರಿಸದಿರು ನೀನು,
ನಿನ್ನ ಕೆಂದುಟಿಯ ನಗುವಿನಲ್ಲಿ ಮಿಂಚುವ ಹೊಳಪು ನಾನು,
ದಯವಿಟ್ಟು ದುಗುಡದಲ್ಲಿ ಮಾಸದಿರು ನನ್ನನು,
ನಾ ಕಂಡಾಗಲೆಲ್ಲ ಬೆರೆ ಕಡೆ ಕಣ್ಣ ಸರೆಸುವ ನಾಚಿಕೆಯು ನಾ,
ಕಾಡದಿರು ಗೆಳತಿ,
ನಿನ್ನ ಕನಸಲ್ಲಿ ಬಯಸದೆ ಬರುವ ಪ್ರೀತಿಯ ಗೆಳೆಯನು ನಾ,
ಮರೆದಿರು ಗೆಳತಿ,
ನಿನ್ನ ಬಾಳಿನ ಪಯನವ ಹೆಜ್ಜೆಯಲ್ಲಿ ಸಹಯಾತ್ರಿಯುನಾ,
ಸಹಮತಿಸಿ, ಸಹಬಾಳ್ವಯ ನಡೆಸು ಗೆಳತಿ...
                                                                :- ಓಂಟಿ ಬಾನಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...