ಸೋಮವಾರ, ಸೆಪ್ಟೆಂಬರ್ 11, 2023

ಒಂದೇ ಮನುಜನ ಮನದಲ್ಲಿರುವರು ರಾಮ ರಾವಣರಿಬ್ಬರು


ಒಬ್ಬ ತಂದೆಯ ಮಾತಿಗೆ ಕಾಡಿಗೆ ಹೋರಾಟ 

ಇನ್ನೊಬ್ಬ ತನ್ನ ಸ್ವಾರ್ಥಕ್ಕೆ ಮಗನ ಬಲಿ ಕೊಟ್ಟ ।


ಒಬ್ಬ ಹೆಣ್ಣಿನ ಮೋಸಕ್ಕೆ ಬಲಿಯಾಗಿ ತನ್ನ ರಾಜ್ಯವ ಬಿಟ್ಟ 

ಇನ್ನೊಬ್ಬ ಹೆಣ್ಣಿನ ಮೋಹಕ್ಕೆ ಬಲಿಯಾಗಿ ತನ್ನ ಪ್ರಣಯನ್ನೇ ಬಿಟ್ಟ ।


ನೊಂದ ಹೆಣ್ಣ ಶಾಪ ವಿಮೋಚಿಸಿ, ಕೊಟ್ಟ ಎಂಜಲ ತಿಂದು ಸವಿದವನೊಬ್ಬನಾದರೆ 

ಇಷ್ಟವಿಲ್ಲದಿದ್ದರು ವ್ಯಾಮೋಹಿಸಿ, ತನ್ನವರಿಂದ ದೂರವಿರಿಸಿ ಸ್ವಾರ್ಥದಿಂದ ಮೆರೆದವ ಇನ್ನೊಬ್ಬನಾದನೆ ।।


ಇಬ್ಬರಲ್ಲೂ ಧರ್ಮ ಅಧರ್ಮವ ಹುಡುಕುವ ಓ ಮನುಜ, ನೀ ಮೊದಲು ತಿಳಿಯೇ 


ಇಬ್ಬರೂ ಹೆಣ್ಣಿಗೆ ನೋವ ನೀಡಿದವರೇ 

ಇಬ್ಬರೂ ಜಗ ಮೆಚ್ಚುವಂತೆ ರಾಜ್ಯವಾಳಿದವರೇ ।


ಇಬ್ಬರು ಭಕ್ತರೇ ಅವರವರ ಇಷ್ಟ ದೈವಕ್ಕೆ 

ಇಬ್ಬರು ಧೂಷಿತರೇ ಅವರವರ ಶತೃ ರಾಷ್ಟ್ರಕ್ಕೆ ।


ಇಬ್ಬರಲ್ಲೂ ಧರ್ಮ ಅಧರ್ಮವ ಹುಡುಕುವ ಓ ಮನುಜ, ನೀ ಮೊದಲು ತಿಳಿಯೇ 

ಧರ್ಮ ಅಧರ್ಮವದು ಯಾವದೋ ಧೈವ ರಾಕ್ಷಸರಲಿಲ್ಲ, ನಿನ್ನದೇ ಮನದ ಭಾವನೆಗಳವು ಅರಿಯೇ ।।

 

ಒಂದೇ ಮನುಜನ ಮನದಲ್ಲಿರುವರು ರಾಮ ರಾವಣರಿಬ್ಬರು

ಇನ್ನೋರ್ವರ ಪ್ರಶ್ನಿಸುವ ಮುನ್ನ, ನೀ ಕೇಳಿಕೊ ನಿನ್ನ, ನಿನ್ನ ಮನದೊಳಗಿರುವವರಾರು 

ರಾಮನೇ, ರಾವಣನೇ …?


:~ ಒಂಟಿ ಬಾನಾಡಿ 


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...