ಬುಧವಾರ, ಸೆಪ್ಟೆಂಬರ್ 13, 2023

ಅರ್ಚಿಸಲು ಬರೆದ ಸಾಲುಗಳು ಅಳೆದವು

 


                  

            ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.

            ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ಒಂದನ್ನೂ ಮುಡಿಯಲೇ ಇಲ್ಲ. 

            ಹಂಬಲಿಸಿದೆ ಹೃದಯವು ನಿನ್ನ ಸೇರಲು, ನೀ ಒಮ್ಮೆಯೂ ಕೇಳಿಸಿಕೊಳೆಲೇ ಇಲ್ಲ. 

            ನಿನಗೆಂದೆ ಜಾರಿದೆ ಈ ಕಣ್ಣ ಕಂಬನಿ ನೀನೆಂದಿಗೂ ನೋಡಲೇ ಇಲ್ಲ …!

                                                                 :~ ಒಂಟಿ ಬಾನಾಡಿ 🕊

ಸೋಮವಾರ, ಸೆಪ್ಟೆಂಬರ್ 11, 2023

ಒಂದೇ ಮನುಜನ ಮನದಲ್ಲಿರುವರು ರಾಮ ರಾವಣರಿಬ್ಬರು


ಒಬ್ಬ ತಂದೆಯ ಮಾತಿಗೆ ಕಾಡಿಗೆ ಹೋರಾಟ 

ಇನ್ನೊಬ್ಬ ತನ್ನ ಸ್ವಾರ್ಥಕ್ಕೆ ಮಗನ ಬಲಿ ಕೊಟ್ಟ ।


ಒಬ್ಬ ಹೆಣ್ಣಿನ ಮೋಸಕ್ಕೆ ಬಲಿಯಾಗಿ ತನ್ನ ರಾಜ್ಯವ ಬಿಟ್ಟ 

ಇನ್ನೊಬ್ಬ ಹೆಣ್ಣಿನ ಮೋಹಕ್ಕೆ ಬಲಿಯಾಗಿ ತನ್ನ ಪ್ರಣಯನ್ನೇ ಬಿಟ್ಟ ।


ನೊಂದ ಹೆಣ್ಣ ಶಾಪ ವಿಮೋಚಿಸಿ, ಕೊಟ್ಟ ಎಂಜಲ ತಿಂದು ಸವಿದವನೊಬ್ಬನಾದರೆ 

ಇಷ್ಟವಿಲ್ಲದಿದ್ದರು ವ್ಯಾಮೋಹಿಸಿ, ತನ್ನವರಿಂದ ದೂರವಿರಿಸಿ ಸ್ವಾರ್ಥದಿಂದ ಮೆರೆದವ ಇನ್ನೊಬ್ಬನಾದನೆ ।।


ಇಬ್ಬರಲ್ಲೂ ಧರ್ಮ ಅಧರ್ಮವ ಹುಡುಕುವ ಓ ಮನುಜ, ನೀ ಮೊದಲು ತಿಳಿಯೇ 


ಇಬ್ಬರೂ ಹೆಣ್ಣಿಗೆ ನೋವ ನೀಡಿದವರೇ 

ಇಬ್ಬರೂ ಜಗ ಮೆಚ್ಚುವಂತೆ ರಾಜ್ಯವಾಳಿದವರೇ ।


ಇಬ್ಬರು ಭಕ್ತರೇ ಅವರವರ ಇಷ್ಟ ದೈವಕ್ಕೆ 

ಇಬ್ಬರು ಧೂಷಿತರೇ ಅವರವರ ಶತೃ ರಾಷ್ಟ್ರಕ್ಕೆ ।


ಇಬ್ಬರಲ್ಲೂ ಧರ್ಮ ಅಧರ್ಮವ ಹುಡುಕುವ ಓ ಮನುಜ, ನೀ ಮೊದಲು ತಿಳಿಯೇ 

ಧರ್ಮ ಅಧರ್ಮವದು ಯಾವದೋ ಧೈವ ರಾಕ್ಷಸರಲಿಲ್ಲ, ನಿನ್ನದೇ ಮನದ ಭಾವನೆಗಳವು ಅರಿಯೇ ।।

 

ಒಂದೇ ಮನುಜನ ಮನದಲ್ಲಿರುವರು ರಾಮ ರಾವಣರಿಬ್ಬರು

ಇನ್ನೋರ್ವರ ಪ್ರಶ್ನಿಸುವ ಮುನ್ನ, ನೀ ಕೇಳಿಕೊ ನಿನ್ನ, ನಿನ್ನ ಮನದೊಳಗಿರುವವರಾರು 

ರಾಮನೇ, ರಾವಣನೇ …?


:~ ಒಂಟಿ ಬಾನಾಡಿ 


 

ಮರುಗದಿರು ಮನವೇ ಎಲ್ಲಿಯೂ ಹೋಗನೆ ನಾನು, ನಿನ್ನ ಬಿಟ್ಟು


ಮರುಗದಿರು ಮನವೇ ಎಲ್ಲಿಯೂ ಹೋಗನೆ  ನಾನು ನಿನ್ನ ಬಿಟ್ಟು, ನೀನೆ ಅಟ್ಟುವವರೆಗೂ ನನ್ನ ಕುತ್ತಿಗೆ ಹಿಡಿದು

 

ಸಲಿ ರಾತ್ರಿಯಲ್ಲಿ ಮಗ್ಗುಲ ಮುರಿವಾಗ ತಾಯಿಯ ಸೆರಗ ಹುಡುಕುವ ಕಂದಮ್ಮನಂತೆ ಬೆದರದಿರು ನೀನು

ಕಂದನ ಬೆನ್ನ ತಟ್ಟಿ ಸಮಾಧಾನಿಸುವ ತಾಯಿಯಂತೆ ಮತ್ತೆ ಬರುವೆನು ನಾನು ।।


ಗುಂಪಲ್ಲಿ ಕಳೆದು ಹೋದ ಸಣ್ಣ ಕರುವಂತೆ ವಿಚಲಿತಳಾಗದಿರು ನೀನು 

ಎಷ್ಟೇ ದೂರವಿದ್ದರು ಹುಡುಕಿ ಬಂದು ಕುತ್ತಿಗೆ ನೆಕ್ಕಿ ಮಮತೆ ತೋರುವ ಹಸುವಂತೆ ಮತ್ತೆ ಬರುವೆನು ನಾನು ।।


ಜಾತ್ರೆಯಲ್ಲಿ ಕಳೆದು ಹೋದ ಮಗುವಂತೆ ಓಬಳೇ ಕಣ್ಣೀರ ಸೂಸದಿರು ನೀನು 

ಹಲವಾರು ಸಲ ಅನುಭವಿಸಿರುವೆ ಅಹ್ ನೋವನ್ನು, ತಿಳಿದೂ ನಿನಗೆ ಅದನ್ನೆಂದೂ ನೀಡೆನು ನಾನು  ।।


ಸುಡು ಬಿಸಿಲ ಕಾವಿಗೆ ಬಾಯ್ತೆರೆದು ಭವನಿಸಬೇಡ ನೀನು 

ಎಷ್ಟೇ ಅಮಾವಾಸ್ಸೆಗಳು ಕಳೆದರೂ, ಮತ್ತೆ ಹುಣಿಮೆಗೆ ಬಂದು ತಂಪನೀವ ನಿನ್ನ ಚಂದಿರನು ನಾನು  ।।


ಮರುಗದಿರು ಮನವೇ ಎಲ್ಲಿಯೂ ಹೋಗನೆ  ನಾನು ನಿನ್ನ ಬಿಟ್ಟು, ನೀನೆ ಅಟ್ಟುವವರೆಗೂ ನನ್ನ ಕುತ್ತಿಗೆ ಹಿಡಿದು… 


:- ಒಂಟಿ ಬಾನಾಡಿ



 

ಭಾನುವಾರ, ಸೆಪ್ಟೆಂಬರ್ 10, 2023

ಕಿವಿಯಲ್ಲೇ ಗುಣುಗುತ್ತಿರುವುದು ನಿನ್ನದೇ ಮಾತು ಅನುಕ್ಷಣವೂ


ಕಿವಿಯಲ್ಲೇ  ಗುಣುಗುತ್ತಿರುವುದು ನಿನ್ನದೇ ಮಾತು ಅನುಕ್ಷಣವೂ 

ಸದಾ ಗುಯ್ ಗುಟ್ಟುವುದು ಮನದಲ್ಲಿ ನಿನ್ನದೇ ಹುಸಿ ನಗುವೂ 

ಹಾತೊರೆಯುವ ಕಡಲಿಗೆ ಜೋ ಎಂದು ಸುರಿವ ಮಳೆಯಂತಿದೆ ನಿನ್ನ ನುಡಿಯೂ  

ಕಾದು ಬರಡಾಗಿರುವ ಒಣ ಭೂಮಿಗೆ ತಂಪ ಎರೆವಂತಿದೆ ನಿನ್ನ ಒಲವೂ 

ಎಷ್ಟೇ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸಿದೆ ಮಧುರವಾದ ನಿನ್ನ ಧನಿಯೂ

ಎಷ್ಟೇ ದೂರಕ್ಕೆ ಹೋದರೂ ಮತ್ತೆ ಧಡದೆಡೆಗೆ ಸೇರುವ ಅಲೆಯಂತಿದೆ ನಿನ್ನ ಸನಿಹವೂ

:- ಒಂಟಿ ಬಾನಾಡಿ

 

ಶನಿವಾರ, ಸೆಪ್ಟೆಂಬರ್ 9, 2023

ನನ್ನ ಸಮುದ್ರ ನೀನು

 


ನೂರಾರು ಜನ್ಮವೆತ್ತಿದ್ದರು ನಿನಗಾಗೆ ದುಮ್ಮಿಕ್ಕಿ ಹರಿಯುವ ನದಿಯು ನಾನು ।

ಪ್ರತಿ ಜನ್ಮದಲ್ಲೂ ನನನ್ನೇ ಸೇರಲು ಹಂಬಲಿಸುವ ನನ್ನ ಸಮುದ್ರ ನೀನು   ।।

ಬೆಟ್ಟ ಗುಡ್ಡ ತೊರೆಯಾಗಿ ಹರಿದು ಬರುವ ನದಿಯು ನಾನು ।

ಎಷ್ಟೇ ವೈವಿಧ್ಯಮಯ ಜೀವವಿದ್ದರೂ ನನಗಾಗೇ ಹಾತೊರೆಯುವ ನನ್ನ ಸಮುದ್ರ ನೀನು ।।

ಭೂಮಿಯೇ ಬಿರಿದು ಜೀವ ಸಂಕುಲವ ನಶಿಶಿ ಹರಿಯುವ ನದಿಯು ನಾನು ।

ಸಾವಿರ ಜೀವ ಸಂಕುಲಗಳ ಜೊತೆ ನನನ್ನೂ ಸ್ವಾಗತಿಸುವ ನನ್ನ ಸಮುದ್ರ ನೀನು ।।

ಎಷ್ಟೇ ಸಲ ಸೋತರು ನಿನಗಾಗೆ ಮತ್ತೆ ಮತ್ತೆ ಹುಟ್ಟಿ ಬರುವ ನದಿಯು ನಾನು ।

ಎಷ್ಟೇ ಯುಗಗಳು ಕಳೆದರೂ ತಾಳ್ಮೆಯಿಂದ ಕಾದಿರುವ ನನ್ನ ಸಮುದ್ರ ನೀನು ।।

:- ಒಂಟಿ ಬಾನಾಡಿ



ಕಾಲದ ಕೈಗೊಂಬೆ (ಮನುಜ) ರೈಲು ಬಂಡಿ



ಬಾಳ ಪಯಣದಿ ಗರ್ವ ತೋರಿ ಹೂಳಿಡುವುದು ರೈಲು ಬಂಡಿ 

ತಾನೇ ಶಕ್ತಿಶಾಲಿ, ತನ್ನ ಅಬ್ಬರಕ್ಕೆ ಸರಿಸಾಟಿ ಇಲ್ಲ ಎಂದು ಗರ್ವ ಪಡೆವುದು ರೈಲು ಬಂಡಿ 

ಅಡ್ಡ ಬಂದವರೆಲರ ಮೆಟ್ಟಿ ಕಾಲ್  ಅಡಿಯಲ್ಲಿ ಹೊಸಕಾಕುವೆ ಎಂದು ಬೀಗುವುದು ರೈಲು ಬಂಡಿ 

ಇಡೀ ಭೂಮಿಯನ್ನೇ ಸುತ್ತಿ ಬಿಡುವೆ ಧಣಿವಾರಿಹದೆ ಎಂದು ಛಲವ ಮೆರೆವುದು ರೈಲು ಬಂಡಿ 


ಆದರೆ ಶಕ್ತಿಶಾಲಿ ರೈಲು ಬಂಡಿಗೇನು ಗೊತ್ತು 


ಮೇಲೆ ಕೂತಿರುವ ಚಾಲಕನಿಲ್ಲದೆ ಒಂದಿಂಚು ಅಲುಗಾಡದು ರೈಲು ಬಂಡಿ 

ದಾರಿಯಲ್ಲಿ ಯಾರೋ ಎಡಕ್ಕೆ ಬಲಕ್ಕೆ ತಿರುಗಿಸಿದೆಡೆಗೆ ನಡೆಯುವುದೇ  ರೈಲು ಬಂಡಿ 

ಎಷ್ಟೇ ಶಕ್ತಿಶಾಲಿಯಾದರೂ ಇನ್ನೊಬ್ಬರ (ಕಾಲದ ) ಕೈಗೊಂಬೆ ರೈಲು ಬಂಡಿ


ಮನುಜನು ಹೀಗೆ ರೈಲು ಬಂಡಿಯಾ ಹಾಗೆ, ಕಾಲದ ಕೈಗೊಂಬೆಯೇ ಸರಿ 


:- ಒಂಟಿ ಬಾನಾಡಿ



ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...