ಶನಿವಾರ, ಡಿಸೆಂಬರ್ 14, 2019

ಹುಡುಗಿರು ರಾಣಿ ಆಗ್ಬೇಕಾದ್ರೆ ಹೀಗೆ ಮಾಡಬೋದಪ್ಪ


ಒಬ್ಬ ಹುಡುಗ ರಾಜನಾಗೊಕ್ಕೆ ರಾಜ್ಯನೇ ಆಳಬೇಕಿಲ್ಲ 
ವಿಶಾಲವಾದ ಮನಸಿದ್ರೆ ಸಾಕು. 
ಒಬ್ಬ ಹುಡುಗಿ ರಾಣಿಯಾಗಬೇಕೆಂದ್ರೆ ರಾಜನ ಮಗಳಾಗೆ ಹುಟ್ಟಬೇಕಿಲ್ಲ 
ಒಬ್ಬ (ನನ್ನಂತಹ) ರಾಜನನ್ನ ಮದುವೆ ಆದ್ರೂ ಸಾಕು. 😜 
:- ಒಂಟಿ ಬಾನಾಡಿ

ಸಂತಸದ ಹಣ್ಣು ಹಾಗು ದುಃಖದ ಹೋರೆ


ಸಂತಸದ ಹಣ್ಣನ್ನು ಎಂದೂ ಹಂಚಿಕೊಂಡು ತಿನ್ನಬೇಕು. 
ದುಃಖದ ಹೊರೆಯನ್ನು ಎಂದೂ ಒಬ್ಬರೇ ಹೊರಬೇಕು. 
 ಏಕೆಂದರೆ, ಸಂತೋಷವನ್ನು ಹಂಚಿಸಿದಷ್ಟು ವೃದ್ಧಿಸುತ್ತದೆ, 
 ದುಃಖವನ್ನು ಹಂಚಿಸಿದಷ್ಟು ಇನ್ನೊಬ್ಬರಿಗೆ ಹೊರೆಯಾಗುತ್ತದೆ.
:- ಒಂಟಿ ಬಾನಾಡಿ 

ನಗುವಾಗ ಎಲ್ಲರ ಜೊತೆ ಕೂಡಿ ನಗಬೇಕು



ನಗುವಾಗ ಎಲ್ಲರ ಜೊತೆ ಕೂಡಿ ನಗಬೇಕು.
ಅಳುವಾಗ ಒಬ್ಬಂಟಿಯಾಗೆ ಅಳಬೇಕು. 
ಏಕೆಂದರೆ, ಒಬ್ಬರೆ ನಕ್ಕರೆ ಹುಚ್ಚನೆನ್ನುವರು, 
ಇನ್ನೊಬ್ಬರ ಮುಂದೆ ಅತ್ತರೆ, ನಮ್ಮ ದುಃಖವನ್ನು ದೌರ್ಬಲ್ಯವೆಂದು ತಿಳಿಯುವರು. 
:- ಒಂಟಿ ಬಾನಾಡಿ

ಶಿಕ್ಷಕರೆಂದರೆ ಯಾರು


ಶಿಕ್ಷಕರೆಂದರೆ ಬರಿ ತಪ್ಪುನ್ನು ಕಂಡಾಗ ಶಿಕ್ಷಿಸಿ ಮುಂದೆ ತಳ್ಳುವ ಕಟುಕರಲ್ಲ, 
ಕೇವಲ ಪುಸ್ತಕದ ತಿರುಳನ್ನು ಮಸ್ತಕದಿ ತುಂಬವ ಯಂತ್ರವಲ್ಲ, 
ತಪ್ಪು ಹೆಜ್ಜೆಗಳನ್ನಿಟ್ಟಾಗ ತಿದ್ದಿ ನಡೆಸುವ ಬಂಧುಗಳವರು, 
ಸ್ವಾರ್ಥವಿಲ್ಲದೆ, ಭೇದ ಭಾವವಿಲ್ಲದೆ ಸಮನಾಗಿ ವಿದ್ಯೆ ಹಂಚುವ ಪಾಲಕರವರು. 
ಹೆಸರು ,ಆಡಂಬರ ಬಯಸದೆ ತನ್ನ ವಿದ್ಯಾರ್ಥಿಗಳ ಏಳಿಗೆ ಬಯಸುವ ನಿಸ್ವಾರ್ಥಿಗಳವರು. 
ನಿಸ್ವಾರ್ಥದಿಂದ ಜ್ಣಾನವನ್ನು ಲೋಕಕ್ಕೆ ಹಂಚುತ್ತಿರುವ ಪ್ರತಿಯೊರ್ವ ಶಿಕ್ಷಕರಿಗೂ ಈ ಕವನ ಅರ್ಪಣೆ  
:- ಒಂಟಿ ಬಾನಾಡಿ 📝🕊

ಕರ್ಮದ ಹಕ್ಕು


ನಮಗೆ ಹಕ್ಕಿರುವುದು ಕೇವಲ ನಮ್ಮ ಇಂದಿನ ಕರ್ಮಗಳಲ್ಲಿ ಮಾತ್ರಾ,
ಏಕೆಂದರೆ ನಮ್ಮ ಗುರಿಯನ್ನು ಆಳುವವರು ನಾವಲ್ಲ , ಕೇವಲ ನಾವು ಮಾಡಿದ ಕರ್ಮ
:- ಒಂಟಿ ಬಾನಾಡಿ 🕊📝

ನೀ ಕೊಟ್ಟಷ್ಟೆ ಪ್ರೀತಿಯ


ನೀ ಕೊಟ್ಟಷ್ಟೆ ಪ್ರೀತಿಯ ಅವರೂ ಕೊಡಬೇಕ್ಕೆನ್ನಲು ಪ್ರೀತಿ ವ್ಯವಹಾವರಲ್ಲ,
ಕೊಡುವುದಷ್ಟೆ ಪ್ರೀತಿ, ಬಯಸುವುದು ಮೋಹ !!!
:- ಒಂಟಿ ಬಾನಾಡಿ

-------------------------------------------------------------------------------------------------------------------------

Love is not a Business, 
To expect the same amount of love 
from the one whom you love the most,
Love is something which you give & 
Business is some thing which you expect as returns!!!
:- BKOB

Don't be as flexible as water



Don't be as flexible as water to every one, 
some may use you to wash there #SS 
Be as hard as Gold 
so that many dream of keep you on there 
HEAD as CROWN
:- BKOB

ತನ್ನವರಾರು ಇಲ್ಲದವ ಅನಾಥನಲ್ಲ,


ತನ್ನವರಾರು ಇಲ್ಲದವ ಅನಾಥನಲ್ಲ, 
ತನ್ನವರೆಲ್ಲರೂ ಇದ್ದರು 
ಒಬ್ಬಂಟಿಯಾಗಿ ಉಳಿವವ ನಿಜವಾದ ಅನಾಥ... :
- ಒಂಟಿ ಬಾನಾಡಿ 🕊📝

ಯಾರೆ ನಿಂತರೂ, ನಿಲ್ಲದೆ ಸಾಗುವುದೆ ಕಾಲದ ನಿಯಮವು





ಯಾರೆ ನಿಂತರೂ, ನಿಲ್ಲದೆ ಸಾಗುವುದೆ ಕಾಲದ ನಿಯಮವು, 
ಕಾಲವುರುಳಿದರೂ ಅಲಿಯಾದೆ ನಿಂತಿಹಿಯೆ ನಾನ್ನಿಂದೂ, 
ಅಂದಿದ ನನ್ನಲಿದ ಪ್ರೀತಿಯು ಹಾಗೆಯೆ ಉಳಿದಿದೆ, 
ಅಂದಿದ ದಾರಿಯು ಇಂದಿಗೂ ಉಳಿದಿದೆ, 
ಬದಲಾಗಿರುವುದೆ ಒಂದೆ ಒಂದು, 
ಅದು ನೀನ್ನಿದ ಜಾಗವು, ಅದು ಅಂದಿಗೂ ಅಛಲ, ಇಂದು ನಿಷ್ಛಲ 
:- ಒಂಟಿ ಬಾನಾಡಿ 

ನೀ ನಡೆದ ದಾರಿಗಳೆಲ್ಲ


ನೀ ನಡೆದ ದಾರಿಗಳೆಲ್ಲ ಇಂದು ನೆನೆಪುಗಳ ಅಂದರ, 
ನೆನಪುಗಳ ಹಾದಿಗಳಲ್ಲಿ ನಡೆದಾಗಳೆಲ್ಲ ಮನದಲ್ಲಿ,
ಪುನರುದ್ಗರಿಸಿದೆ ಒಲವಿನ ಮಂದಿರ 
:- ಒಂಟಿ ಬಾನಾಡಿ

ಬದುಕು ಜಟಕ ಬಂಡಿ



ಜೀವನವೊಂದು ಜಟಕ ಬಂಡಿ
ಮನಸೇ ಅದರ ಸಾಹೆಬ
ಚಿಂತನೆಗಳೆ ಅದರ ಕುದುರೆ
ನಂಬಿಕೆ, ಆತ್ಮವಿಶ್ವಾಸವೆ ಅದರ ಎರಡು ಚಕ್ರಗಳು
ಆದರ್ಶ, ಸ್ವಾಬಿಮಾನವೇ ಎರಡು ಕೊಂಡಿಗಳು
ಎಲ್ಲಾ ಸೆರಿ ನಡೆದರೆ ಸುಖಕರ ಜೀವನದ ಪಯಣ
ಸಲ್ಪ ಎಡವಟ್ಟಾದರೂ ಪಯಣಕ್ಕೆ ವಿರಾಮವೇ||
:- ಒಂಟಿ  ಬಾನಾಡಿ 

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...