ಮಂಗಳವಾರ, ಜೂನ್ 19, 2018

ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |65|


ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ||೬೫||


    ತಾರ್ತ್ಪಯ :-
ಪುಸ್ತಕಗಳನ್ನು ಓದಿ ದೊರೆತ ಜ್ಞಾನ, ತಲೆಯ ಮೇಲೆ ಇರುವ ಮಣಿಯಂತೆ.
ಆದರೆ ಮನಸ್ಸಿನಲ್ಲಿ ಬೆಳೆದ ಅರಿವು, ಗಿಡದಲ್ಲಿ ಬೆಳೆದ ಹೂವಿನಂತೆ. ವಸ್ತುವಿನ ಸಾಕ್ಷಾತ್ಕಾರವಾಗುವುದು ಒಳನೋಟದಿಂದಲೇ ಹೊರತು ಪಾಂಡಿತ್ಯದಿಂದಲ್ಲ
     :-ಡಿ.ವಿ.ಜಿ                 


Abstraction In English
The Knowledge you get by Reading books is like a beed on top of your head, But the knowledge which generates in your mind is like a flower from the plant, the true realization of a person is known when you look inside a person not by his expertise
 :- D.V.G              

ಅರ್ಚಿಸಲು ಬರೆದ ಸಾಲುಗಳು ಅಳೆದವು

                                        ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ.                ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...